ಗೋಲ್ಡನ್ ಸ್ಟಾರ್ ಗಣೇಶ್ ಹಾಗು ರಶ್ಮಿಕಾ ಮಂದಣ್ಣ ಅವರ ಅಭಿನಯದ ಚಮಕ್ ಸಿನಿಮಾ ನೋಡುಗರಿಗೆ ಕಿಕ್ ನೀಡುತ್ತಿದೆ. ಒಳ್ಳೆಯ ರೀತಿಯಲ್ಲಿಯೇ ಚಮಕ್ ಕೊಟ್ಟು, ನವ ವರ್ಷವನ್ನು ಬರಮಾಡಿಕೊಂಡಿದೆ ಈ ಜೋಡಿ. ಎಂತಹ ಪಾತ್ರಕ್ಕೂ ಒಪ್ಪುವ ನಟ ಮತ್ತು ವಿಭಿನ್ನವಾಗಿ ಯೋಚಿಸುವ ನಿರ್ದೇಶಕರ ಕಾಂಬಿನೇಷನ್ ಈ ಚಿತ್ರಕ್ಕಿರುವುದರಿಂದ ಚಿತ್ರಪೂರ್ತಿ ತಮ್ಮದೇ ಸ್ಟೈಲ್ನಲ್ಲಿ ಚಮಕ್ ನೀಡಿದ್ದಾರೆ ನಿರ್ದೇಶಕರು. ಎಲ್ಲ ಕಡೆಯಿಂದ ಒಳ್ಳೆಯ ಓಪನಿಂಗ್ ಪಡೆದುಕೊಂಡಿದ್ದ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್