ಬೆಂಗಳೂರು: ಗಾಳಿಪಟ 2 ಸಿನಿಮಾ ಗೆದ್ದಿರುವುದು ಗೋಲ್ಡನ್ ಸ್ಟಾರ್ ಗಣೇಶ್ ಗೆ ಹೊಸ ಹುಮ್ಮಸ್ಸು ತಂದುಕೊಟ್ಟಿದೆ.ಯೋಗರಾಜ್ ಭಟ್ ನಿರ್ದೇಶನದಲ್ಲಿ ಗಣೇಶ್ ಮಾಡಿರುವ ಎಲ್ಲಾ ಸಿನಿಮಾಗಳೂ ಸೂಪರ್ ಹಿಟ್ ಆಗಿವೆ. ಆ ಸಾಲಿಗೆ ಗಾಳಿಪಟ 2 ಕೂಡಾ ಸೇರಿಕೊಂಡಿದೆ. ಇದರ ಹಿನ್ನಲೆಯಲ್ಲಿ ಗಣೇಶ್ ಅಭಿಮಾನಿಗಳಿಗೆ ಪತ್ರ ಬರೆದು ಧನ್ಯವಾದ ಸಲ್ಲಿಸಿದ್ದಾರೆ.ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ನಿಮ್ಮ ತೀರ್ಪನ್ನು ಸಮಚಿತ್ತದಿಂದ ಎದುರಿಸಿದ್ದೇನೆ. ಇದಕ್ಕೆಲ್ಲಾ ನೀವು ನನ್ನ ಮೇಲಿಟ್ಟಿರುವ ಅಪಾರ ನಂಬಿಕೆಗೆ ನಾನು ಸಲ್ಲಿಸಬಹುದಾದ ಪುಟ್ಟ