ಚೆನ್ನೈ: ರಾಜಕೀಯ ಪಕ್ಷ ಘೋಷಿಸಿದ ಬೆನ್ನಲ್ಲೇ ಬಹುಭಾಷಾ ತಾರೆ ಕಮಲ್ ಹಾಸನ್ ಗೆ ಅವರ ಮಾಜಿ ಗೆಳತಿ, ನಟಿ ಗೌತಮಿ ಹೊಸದೊಂದು ಆರೋಪ ಹೊರಿಸಿದ್ದಾರೆ.13 ವರ್ಷಗಳ ಕಾಲ ಕಮಲ್ ಜತೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದ ಗೌತಮಿ 2016 ರಲ್ಲಿ ಬೇರ್ಪಟ್ಟಿದ್ದರು. ಜತೆಯಾಗಿದ್ದಾಗ ಗೌತಮಿ, ಕಮಲ್ ಸಿನಿಮಾಗಳಿಗೆ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು.ಅದೇ ಸಂದರ್ಭದಲ್ಲಿ ದುಡಿದ ಸಿನಿಮಾಗಳಿಗೆ ವೇತನ ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಕಮಲ್ ಮೇಲೆ ಗೌತಮಿ ಆರೋಪ ಮಾಡಿದ್ದಾರೆ.