ಆಯಾ ಕಾಲಘಟ್ಟದಲ್ಲಿ ಸಮಾಜದ ಪಲ್ಲಟಗಳಿಗೆ ಕಣ್ಣಾಗುವಂಥಾ ಕಥೆಗಳು ಸಿನಿಮಾವಾಗಿ ಸಾಮಾಜಿಕ ಕ್ರಾಂತಿಗೆ ಕಾರಣವಾದ ಇತಿಹಾಸ ಕನ್ನಡ ಚಿತ್ರರಂಗಕ್ಕಿದೆ. ಹಲವಾರು ವಿಚಾರಗಳ ಬಗ್ಗೆ ಜನ ಜಾಗೃತಿ ಮೂಡಿಸೋದರಿಂದ ಹಿಡಿದು ಕನ್ನಡಾಭಿಮಾನವನ್ನು ಗಟ್ಟಿಗೊಳಿಸುವವರೆಗೆ ಸಿನಿಮಾಗಳ ಪಾಲು ದೊಡ್ಡದಿದೆ. ಇದೀಗ ತೆರೆಗಾಣಲು ಸಜ್ಜಾಗಿರುವ ಗಣೇಶ್ ಅಭಿನಯದ ಗೀತಾ ಚಿತ್ರದಿಂದಲೇ ಕರ್ನಾಟಕದಲ್ಲಿ ಮತ್ತೊಮ್ಮೆ ಕನ್ನಡಪರ ಹೋರಾಟದ ಕಾವೇರಿಕೊಳ್ಳಲಿದೆಯಾ ಅಂತೊಂದು ಪ್ರಶ್ನೆ ಎಲ್ಲರಲ್ಲಿಯೂ ಇದೆ. ಹೇಳಿಕೇಳಿ ಈಗ ಕರ್ನಾಟಕದಲ್ಲಿ ಕನ್ನಡಿಗರು ಮತ್ತು ಕನ್ನಡದ ಅಳಿವು ಉಳಿವಿನ ಬಗ್ಗೆ