ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೋಂ ಬ್ಯಾನರಿನಲ್ಲಿ ನಿರ್ಮಾಣಗೊಂಡಿರುವ ಮೊದಲ ಚಿತ್ರ ಗೀತಾ. ಸೈಯದ್ ಸಲಾಂ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಹೋಂ ಬ್ಯಾನರಿನ ಕನಸು ಕಟ್ಟಿಕೊಂಡಿದ್ದ ಗಣೇಶ್, ಅದರಿಂದ ನಿರ್ಮಾಣವಾಗೋ ಚಿತ್ರ ಹೊಸಾ ರೀತಿಯಲ್ಲಿರಬೇಕೆಂಬ ಆಸೆ ಹೊಂದಿದ್ದರು. ನವ ನಿರ್ದೇಶಕ ವಿಜಯ್ ನಾಗೇಂದ್ರ ಕಥೆಯೂ ಅದಕ್ಕೆ ತಕ್ಕುದಾಗಿದ್ದುದರಿಂದ ಗೀತಾ ಸಿನಿಮಾ ಜೀವ ಪಡೆದುಕೊಂಡಿದೆ. ಈವರೆಗಿನ ಒಂದಷ್ಟು ಚಿತ್ರಗಳಲ್ಲಿ ಗಣೇಶ್ಗೆ ಇಬ್ಬಿಬ್ಬರು ನಾಯಕಿಯರು