ಗೀತಾ ಎಂಬ ಚಿತ್ರ ಘೋಷಣೆಯಾದ ಬೆನ್ನಿಗೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಫಸ್ಟ್ ಲುಕ್ ಬಿಡುಗಡೆಯಾಗಿತ್ತಲ್ಲಾ? ಅದನ್ನು ನೋಡಿದಾಗಲೇ ಇದು ಹೊಸಾ ಬಗೆಯ ಕಥೆ ಹೊಂದಿರೋ ಸಿನಿಮಾ ಎಂಬ ಅಂದಾಜು ಸಿಕ್ಕಿ ಹೋಗಿತ್ತು. ಆ ನಂತರದಲ್ಲಿ ತೇಲಿ ಬಂದಿದ್ದ ಒಂದಷ್ಟು ವಿವರಗಳೂ ಕೂಡಾ ಅದಕ್ಕೆ ಪೂರಕವಾಗಿದ್ದವು. ಇದೀಗ ಇದರ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಈ ಮೂಲಕವೇ ಅಂಥಾ ಆರಂಭಿಕ ಅಂದಾಜುಗಳೆಲ್ಲವೂ ನಿಜವಾಗೋ ಭರವಸೆಯೂ ಮೂಡಿಕೊಂಡಿದೆ. ಗೀತಾ ವಿಜಯ್ ನಾಗೇಂದ್ರ