ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರ ಇದೇ ತಿಂಗಳ 27ರಂದು ತೆರೆಗಾಣಲು ರೆಡಿಯಾಗಿದೆ. ಇತ್ತೀಚೆಗಷ್ಟೇ ಸಂತೋಷ್ ಆನಂದ್ರಾಮ್ ಬರೆದ ಕನ್ನಡ ತನದ ಲಿರಿಕಲ್ ವೀಡಿಯೋ ಒಂದರ ಮೂಲಕ ಸದ್ದು ಮಾಡಿದ್ದ ಟ್ರೇಲರ್ ಇದೀಗ ಬಿಡುಗಡೆಗೊಂಡಿದೆ. ಗಣೇಶ್ ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಗೀತಾ ತನ್ನ ವೃತ್ತಿ ಜೀವನದಲ್ಲಿಯೇ ವಿಶೇಷ ಚಿತ್ರವೆಂದು ಹೇಳಿಕೊಂಡಿದ್ದರು. ಈಗ ಬಂದಿರೋ ಟ್ರೇಲರ್ ತುಂಬಾ ಅದಕ್ಕೆ ಸಾಕ್ಷೆಯೆಂಬಂಥಾ ಸನ್ನಿವೇಶಗಳಿದ್ದಾವೆ! ಈ ಟ್ರೇಲರ್ನಲ್ಲಿ ಪ್ರಧಾನವಾಗಿ ಮೂಡಿ ಬಂದಿರೋದು