ಪ್ರಜ್ವಲ್ ದೇವರಾಜ್ ಇದುವರೆಗೂ ಒಂದಷ್ಟು ಬಗೆಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ. ಯಾವುದೇ ಪಾತ್ರಗಳಿಗಾದರೂ ಸೈ ಎಂಬಂತೆ ನಟಿಸುವ ಕಸುವು ಹೊಂದಿರುವ ಪ್ರಜ್ವಲ್ಗೆ ತಕ್ಕುದಾದ ಪಾತ್ರಗಳೇ ಇತ್ತೀಚಿನ ದಿನಗಳಲ್ಲಿ ಒಲಿದು ಬರಲಾರಂಭಿಸಿವೆ. ಮದುವೆಯಾದ ನಂತರದಲ್ಲಿ ಏಕಕಾಲದಲ್ಲಿಯೇ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡು ಮುಂದುವರೆಯುತ್ತಿರುವ ಪ್ರಜ್ವಲ್ ನಟಿಸಿರೋ ಬಿಡುಗಡೆಯ ಹಾದಿಯಲ್ಲಿರೋ ಸಿನಿಮಾಗಳಲ್ಲಿ ಜಂಟಲ್ ಮನ್ ಬಹು ಮುಖ್ಯವಾಗಿ ಪರಿಗಣಿಸಲ್ಪಟ್ಟಿದೆ. ವಿಶಿಷ್ಟವಾದ ಕಥಾ ಹಂದರವನ್ನೊಳಗೊಂಡಿರುವ ಈ ಚಿತ್ರದ ಲಿರಿಕಲ್ ಸಾಂಗ್ ಇದೇ ತಿಂಗಳ ಹದಿನೆಂಟನೇ