Widgets Magazine

ರಿಲೀಸ್‌ಗೂ ಮೊದಲೇ ಟಾಲಿವುಡ್ ಕಾಲಿವುಡ್ ನಲ್ಲಿ ಜಂಟಲ್‌ಮ್ಯಾನ್‌ಗೆ ಡಿಮ್ಯಾಂಡೋ ಡಿಮ್ಯಾಂಡ್..!!

gentle man
ಬೆಂಗಳೂರು| rajesh patil| Last Updated: ಗುರುವಾರ, 16 ಜನವರಿ 2020 (11:00 IST)
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಿಶ್ವಿಕಾ ನಾಯ್ಡು ಅಭಿನಯದ ಜಂಟಲ್ ಮ್ಯಾನ್ ಚಿತ್ರದ ಹವಾ ಜೋರಾಗಿದೆ. ಟ್ರೈಲರ್ ಮೂಲಕ ಗಮನ ಸೆಳೆದ ಜಂಟಲ್ ಮ್ಯಾನ್ ಕರ್ನಾಟಕ ಬಾರ್ಡರ್ ಆಚೆಗೂ ಸದ್ದು ಮಾಡೋಕೆ ಶುರು ಮಾಡಿಕೊಂಡಿದೆ. ಚಿತ್ರದ ಯುನೀಕ್ ಕಾನ್ಸೆಪ್ಟ್, ಹಾಗೂ ಸ್ಟೋರಿಗೆ ತೆಲುಗು, ತಮಿಳು ಚಿತ್ರ ನಿರ್ಮಾಪಕರು ಕ್ಲೀನ್ ಬೋಲ್ಡ್ ಆಗಿದ್ದು, ಚಿತ್ರದ ರಿಮೇಕ್ ರೈಟ್ಸ್ಗಾಗಿ ಚಿತ್ರತಂಡವನ್ನು ಸಂಪರ್ಕಿಸಿದ್ದಾರಂತೆ. ಚಿತ್ರದ ನಿರ್ಮಾಪಕರಾದ ಗುರುದೇಶಪಾಂಡೆ ಈ ಸಂತಸ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ತೆಲುಗು, ತಮಿಳು ಖ್ಯಾತ ನಿರ್ಮಾಪಕರು ಚಿತ್ರದ ರಿಮೇಕ್ ರೈಟ್ಸ್‌ಗಾಗಿ ಚಿತ್ರತಂಡವನ್ನು ಈಗಾಗಲೇ ಸಂಪರ್ಕ ಮಾಡಿದ್ದು ಮಾತುಕತೆ ನಡೆಯುತ್ತಿದೆ.ಬಹು ಭಾಷಾ ನಟ ಸಾಯಿಕುಮಾರ್ ಕೂಡ ಚಿತ್ರದ ವಿಶಿಷ್ಟ ಕಥಾಹಂದರಕ್ಕೆ ಫಿದಾ ಆಗಿದ್ದು ತೆಲುಗು, ತಮಿಳಿನಲ್ಲಿ ಚಿತ್ರವನ್ನು ರಿಮೇಕ್ ಮಾಡಲು ಮನಸ್ಸು ಮಾಡಿದ್ದಾರೆ.ಅಷ್ಟೇ ಅಲ್ಲ ತಮಿಳು ಸ್ಟಾರ್ ನಟ ಸಿಂಬು ಮ್ಯಾನೇಜರ್ ಸೌಂದರ್, ಮಲಯಾಳಂ ತಿರುಸೂರು ಸುನಿಲ್ಸೂರ್ಯ ಸೇರಿದಂತೆ ತಮಿಳಿನ ವೆಲ್ಸ್ ಫಿಲ್ಮಂ ಇಂಟರ್ನ್ಯಾಷನಲ್ ಮುಖ್ಯಸ್ಥ ಹಾಗೂ ನಿರ್ಮಾಪಕರು ಆದ ಇಶಾರಿ ಗಣೇಶ್, ನಿರ್ಮಾಪಕ ಕಥ್ರೇಶನ್ಸೇರಿದಂತೆ ಹಲವು ನಿರ್ಮಾಪಕರು ಜಂಟಲ್ ಮ್ಯಾನ್ ರಿಮೇಕ್ಹಕ್ಕಿಗಾಗಿ ನಿರ್ಮಾಪಕ ಗುರುದೇಶ ಪಾಂಡೆಯವರನ್ನು ಸಂಪರ್ಕಿಸಿದ್ದು ಸಂಕ್ರಾತಿ ನಂತರ ಫೈನಲ್ ಮಾತುಕತೆ ನಡೆಯಲಿದೆ.
gentle man
ಕಳೆದ ವಾರ ರಿಲೀಸ್ ಆದ ಜಂಟಲ್ ಮ್ಯಾನ್ಟ್ರೈಲರ್ ಎಲ್ಲರ ಗಮನ ಸೆಳೆದಿತ್ತು. ಚಿತ್ರದಲ್ಲಿ ಪ್ರಜ್ವಲ್ದೇವರಾಜ್ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ನಿಂದ ಬಳಲುವವ್ಯಕ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನದಲ್ಲಿ ಸುಮಾರು 18ಗಂಟೆ ಮಲಗಿರುವ ವ್ಯಕ್ತಿ ಎದ್ದಿರುವಆರು ಗಂಟೆಯಲ್ಲಿ ಹೇಗೆ ಇರುತ್ತಾನೆ ಎನ್ನುವ ಇಂಟ್ರಸ್ಟಿಂಗ್ ಕಹಾನಿ ಚಿತ್ರದಲ್ಲಿದೆ.
gentle man

ಸಸ್ಪೆನ್ಸ್ ಅಂಡ್ಥ್ರಿಲ್ಲರ್ ಕಥಾನಕ ಹೊಂದಿರುವ ಚಿತ್ರವನ್ನುಜಡೇಶ್ಕುಮಾರ್ ಹಂಪಿ ನಿರ್ದೇಶನದ ಮಾಡಿದ್ದಾರೆ. ರಿಲೀಸ್ಗೂ ಮೊದಲೇ ಚಿತ್ರಕ್ಕೆ ಸಿಗುತ್ತಿರುವ ಬೇಡಿಕೆ ಕಂಡುಚಿ ತ್ರತಂಡ ಖುಷಿಯಾಗಿದೆ.ಜನವರಿ 31ಕ್ಕೆ ಜಂಟಲ್ ಮ್ಯಾನ್ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :