ಬೆಂಗಳೂರು: ದೇಶದಾದ್ಯಂತ ವಯೋವೃದ್ಧರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದ್ದು, ನಟಿ ಗಿರಿಜಾ ಲೋಕೇಶ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ತೆಗೆದುಕೊಂಡ ವಿಚಾರವನ್ನು ಪುತ್ರ ಸೃಜನ್ ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದೇವೆ. ನಮ್ಮ ಅಮ್ಮ ಸ್ಟ್ರಾಂಗೆಸ್ಟ್’ ಎಂದು ಸೃಜನ್ ಬರೆದುಕೊಂಡಿದ್ದಾರೆ.‘ಸರ್ಕಾರ ನಮಗೋಸ್ಕರ ಲಸಿಕೆ ತಂದಿದೆ. ಇದರಿಂದ ಏನೂ ತೊಂದರೆಯಾಗಲ್ಲ. ನಾನು ತಗೊಂಡು ಆರಾಮವಾಗಿದ್ದೀನಿ. ಲಸಿಕೆ ಬಂದ ಮೇಲೆ ತಾತ್ಸಾರ ಮಾಡೋದು ಸರಿಯಲ್ಲ. ಎಲ್ಲರೂ ಹೋಗಿ ಲಸಿಕೆ ಹಾಕಿಸಿಕೊಳ್ಳಿ’