ಬೆಂಗಳೂರು: ಅನ್ ಲಾಕ್ 2.0 ರಲ್ಲಿ ರಾಜ್ಯ ಸರ್ಕಾರ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದು ಚಿತ್ರರಂಗ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಇದು ಇಷ್ಟಕ್ಕೇ ಸಾಲಲ್ಲ ಎನ್ನುವುದು ಸಿನಿಮಂದಿಯ ಅಭಿಪ್ರಾಯ.ಎಷ್ಟೋ ಸಿನಿಮಾ ತಂಡಗಳು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ವಿಶೇಷ ಸೆಟ್ ಹಾಕಿಕೊಂಡು ಚಿತ್ರೀಕರಣಕ್ಕೆ ಸಿದ್ಧತೆ ನಡೆಸಿದ್ದವು. ಈಗ ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡದೇ ಇದ್ದರೆ ಈ ಸೆಟ್ ಹಾಳಾಗುತ್ತದೆ. ಇದಕ್ಕೆ ಹಾಕಿದ ಬಂಡವಾಳವೂ ನೀರುಪಾಲಾಗುತ್ತದೆ.ಹೀಗಾಗಿ ಒಳಾಂಗಣ ಚಿತ್ರೀಕರಣಕ್ಕೂ