ಪುನೀತ್ ಸಮಾಧಿ ನೋಡಲು ಬಂದವರನ್ನು ತಳ್ಳೋದು ಸರೀನಾ?

ಬೆಂಗಳೂರು| Krishnaveni K| Last Modified ಬುಧವಾರ, 24 ನವೆಂಬರ್ 2021 (09:45 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಮಾಧಿ ನೋಡಲು ರಾಜ್ಯದ ನಾನಾ ಕಡೆಯಿಂದ ಪ್ರತಿನಿತ್ಯ ಜನ ಬರುತ್ತಿದ್ದಾರೆ. ಆದರೆ ಅಭಿಮಾನಿಗಳಿಗೆ ಸಮಾಧಿ ನೋಡಲು ಸರಿಯಾಗಿ ಅವಕಾಶ ಕೊಡುತ್ತಿಲ್ಲ ಎನ್ನುವುದು ಅಭಿಮಾನಿಗಳ ದೂರು.

ಈ ಬಗ್ಗೆ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಧ‍್ವನಿಯೆತ್ತಿದ್ದಾರೆ. ಸಮಾಧಿ ಬಳಿ ಬರುವ ಅಭಿಮಾನಿಗಳಿಗೆ ಎರಡು ಸೆಕೆಂಡ್ ಕೂಡಾ ಅಲ್ಲಿ ನಿಲ್ಲಲು ಪೊಲೀಸರು ಅವಕಾಶ ಕೊಡಲ್ಲ. ತಳ್ಳಿ ಮುಂದೆ ಸಾಗ ಹಾಕುತ್ತಾರೆ ಇದು ಸರಿಯಲ್ಲ ಎಂದಿದ್ದಾರೆ.


ಅಷ್ಟು ದೂರದಿಂದ ಪುನೀತ್ ಸಮಾಧಿ ನೋಡಬೇಕೆಂದು ಪ್ರೀತಿಯಿಂದ ಬರುವ ಜನಕ್ಕೆ ಹಾರ ಹಾಕಲಾದರೂ ಅವಕಾಶ ಕೊಡಿ ಎಂದು ರೂಪೇಶ್ ರಾಜಣ್ಣ ಪುನೀತ್ ಫ್ಯಾನ್ಸ್ ಪರವಾಗಿ ಆಗ್ರಹಿಸಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :