ಗೋಲ್ಡನ್ ಸ್ಟಾರ್ ಗಣೇಶ್ ರೊಮ್ಯಾಂಟಿಕ್ ಹಾಡು ನಾಳೆ ರಿಲೀಸ್

ಬೆಂಗಳೂರು| Krishnaveni K| Last Modified ಶುಕ್ರವಾರ, 6 ಸೆಪ್ಟಂಬರ್ 2019 (08:54 IST)
ಬೆಂಗಳೂರು: ಗೀತಾ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ನಾಳೆ ಮತ್ತೊಂದು ರಸದೌತಣ ಸಿಗಲಿದೆ.
 > ಕಳೆದ ವಾರವಷ್ಟೇ ಪುನೀತ್ ರಾಜ್ ಕುಮಾರ್ ಹಾಡಿದ್ದ ಕನ್ನಡ ಥೀಮ್ ಸಾಂಗ್ ಬಿಡುಗಡೆಯಾಗಿತ್ತು. ಈ ಹಾಡಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಾಡು ಕೇಳಿದವರು ಗೋಲ್ಡನ್ ಸ್ಟಾರ್ ಗೆ ಬ್ರೇಕ್ ಸಿಗೋದು ಗ್ಯಾರಂಟಿ ಎಂದು ಮಾತಾಡಿಕೊಂಡಿದ್ದರು.>   ಈಗ ಗೀತಾ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗುತ್ತಿದೆ. ಹೇಳದೇ ಕೇಳದೇ ಎನ್ನುವ ರಾಜೇಶ್ ಕೃಷ್ಣನ್ ಮತ್ತು ಅನನ್ಯ ಭಟ್ ಹಾಡಿದ ರೊಮ್ಯಾಂಟಿಕ್ ಹಾಡೊಂದು ನಾಳೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :