ಗೋಲ್ಡನ್ ಸ್ಟಾರ್ ಗಣೇಶ್ ಗೆ ಇದು ಬ್ಯುಸಿ ವರ್ಷ

ಬೆಂಗಳೂರು| Krishnaveni K| Last Modified ಮಂಗಳವಾರ, 4 ಮೇ 2021 (09:22 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಸಿನಿಮಾ ಚಟುವಟಿಕೆಗಳು ಸ್ಥಗಿತವಾಗಿರಬಹುದು. ಆದರೆ ಒಂದು ವೇಳೆ ಮತ್ತೆ ಥಿಯೇಟರ್ ತೆರೆದರೆ ಸಿನಿ ಚಟುವಟಿಕೆಗಳು ಗರಿಗೆದರಲಿವೆ.

 
ಈ ವರ್ಷ ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಗೋಲ್ಡನ್ ವರ್ಷವಾಗಬೇಕಿತ್ತು. ಯಾಕೆಂದರೆ ಗಣೇಶ್ ಕೈಯಲ್ಲಿ ಈಗ ಮೂರು ಸಿನಿಮಾಗಳಿವೆ. ಈ ಮೂರೂ ಸಿನಿಮಾಗಳ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ.
 
ಒಂದು ವೇಳೆ ಲಾಕ್ ಡೌನ್ ಇಲ್ಲದೇ ಹೋಗಿದ್ದರೆ ಗಣೇಶ್ ರ ಮೂರು ಸಿನಿಮಾಗಳು ಈ ವರ್ಷವೇ ಬಿಡುಗಡೆಯಾಗುತ್ತಿದ್ದವು. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಅದು ಕಷ್ಟ. ಹಾಗಿದ್ದರೂ ಎರಡು ಸಿನಿಮಾಗಳು ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :