ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾ ಬಿಡುಗಡೆಗೆ ಇನ್ನೇನು 10 ದಿನಗಳು ಬಾಕಿಯಿವೆ. ಇದರ ನಡುವೆ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.ಈ ನಡುವೆ ಗೀತಾ ಸಿನಿಮಾಗೆ ದಿವಂಗತ ನಟ, ನಿರ್ದೇಶಕ ಶಂಕರ್ ನಾಗ್ ಅಭಿಮಾನಿಗಳ ಬೆಂಬಲ ಸಿಕ್ಕಿದೆ. ಗೀತಾ ಎಂಬ ಹೆಸರು ಕೇಳಿದ ಕೂಡಲೇ ನೆನಪಾಗೋದು ಶಂಕರ್ ನಾಗ್ ಗೀತಾ ಸಿನಿಮಾ. ಇದೇ ಹೆಸರು ಈಗ ಗಣೇಶ್ ಚಿತ್ರಕ್ಕೂ ಇಡಲಾಗಿದೆ.ವಿಶೇಷವೆಂದರೆ ಶಂಕರ್ ನಾಗ್ ಅಭಿನಯದ ಗೀತಾ ಬಿಡುಗಡೆಯಾಗಿದ್ದು,