ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಎಂದರೆ ಚಿಗುರು ಮೀಸೆಯ ಹ್ಯಾಂಡ್ಸಮ್ ಹೀರೋ ಎಂದೇ ಚಿರಪರಿಚಿತ. ಸಿನಿಮಾಗಾಗಿ ಅವರು ದಾಡಿ ಬಿಟ್ಟರೂ ಅದು ಕಂಡೂ ಕಾಣಿಸದಂತಿತ್ತು. ಆದರೆ ಈಗ ಕೊರೋನಾ ಮಹಿಮೆಯಿಂದ ಗಣೇಶ್ ಲುಕ್ ಬದಲಾಗಿದೆ. ಗೋಲ್ಡನ್ ಗಣಿ ಉದ್ದ ಗಡ್ಡ, ವಿಪರೀತ ಕೂದಲು ಬೆಳೆಸಿಕೊಂಡು ಗುರುತೇ ಸಿಗದಷ್ಟು ಬದಲಾಗಿ ಹೋಗಿದ್ದಾರೆ. ಎಲ್ಲವೂ ಕ್ವಾರಂಟೈನ್ ಮಹಿಮೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ಸಿನಿಮಾ ವಿಚಾರಕ್ಕೆ ಬಂದರೆ ಗಣೇಶ್ ಈಗ ಯೋಗರಾಜ್ ಭಟ್