ಟಿವಿ, ಪೇಪರ್ ನೋಡಿ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ಮಾಡಿದ ಕೆಲಸ ನೋಡಿ!

ಬೆಂಗಳೂರು| Krishnaveni K| Last Modified ಶನಿವಾರ, 21 ನವೆಂಬರ್ 2020 (09:21 IST)
ಬೆಂಗಳೂರು: ಮಕ್ಕಳು ಟಿವಿಯಲ್ಲಿ ಬರುವ ಕಾರ್ಯಕ್ರಮ ನೋಡಿ ಬೇಗನೇ ಪ್ರಭಾವಿತರಾಗುತ್ತಾರೆ ಎಂಬುದು ನಮ್ಮ ಅನುಭವಕ್ಕೂ ಬಂದಿರುತ್ತದೆ. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ ವಿಹಾನ್ ಕೂಡಾ ಅದನ್ನೇ ಮಾಡಿದ್ದಾನೆ.

 
ಕೊರೋನಾ ಕಾಲದಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಯೂ ಎಲ್ಲಾ ಟಿವಿ ಚಾನೆಲ್ ಗಳಲ್ಲಿ ಕೊರೋನಾದ್ದೇ ಸುದ್ದಿ. ಇದನ್ನು ನೋಡಿ ವಿಹಾನ್ ಆಪಲ್ ನಲ್ಲಿ ಕೊರೋನಾ ವೈರಾಣುವಿನ ಪ್ರತಿಕೃತಿ ನಿರ್ಮಿಸಿದ್ದಾನಂತೆ. ಮೊದಲು ಇವನು ಸೇಬು ಬೇಕೆಂದು ಕೇಳಿದಾಗ ತಿನ್ನಲು ಇರಬೇಕೆಂದುಕೊಂಡೆವು. ಆದರೆ ಈ ರೀತಿ ಮಾಡಿದ್ದಾನೆ ಎಂದು ಗಣೇಶ್ ಸಾಮಾಜಿಕ ಜಾಲತಾಣದಲ್ಲಿ ವಿಹಾನ್ ಸೇಬು ಬಳಸಿ ಮಾಡಿರುವ ಕೊರೋನಾ ವೈರಾಣುವಿನ ಪ್ರತಿಕೃತಿಯನ್ನು ಪ್ರಕಟಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :