ಬೆಂಗಳೂರು : ಬಹುಭಾಷಾ ನಟಿ ಪ್ರಿಯಾಮಣಿ ಟ್ವೀಟ್ ವೊಂದನ್ನು ಮಾಡುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದ್ದಾರೆ. ಹೌದು ನಟಿ ಪ್ರಿಯಾಮಣಿ ಇತ್ತೀಚೆಗೆ ಟ್ವೀಟರ್ ನಲ್ಲಿ ತಮ್ಮ ಪತಿ ಮುಸ್ತಾಫ್ ರಾಜ್ ಜೊತೆಯಿರುವ ಫೋಟೊವೊಂದನ್ನು ಪೋಸ್ಟ್ ಮಾಡಿ ಅದರ ಜೊತೆಗೆ ನಾನು ಮತ್ತು ನನ್ನ ಪತಿ ಮುಸ್ತಾಫ್ ರಾಜ್ ಕಡೆಯಿಂದ ಸಮ್ಥಿಂಗ್ ಇಂಟ್ರೆಸ್ಟಿಂಗ್ ಹಾಗೂ ಫನ್ ಸಂಗತಿಯೊಂದು ನಿಮ್ಮ ಮುಂದೆ ಬರಲಿದೆ. ವೇಟ್ ಆಂಡ್ ವಾಚ್ ಎಂದು ಟ್ವೀಟ್ ಮಾಡಿದ್ದಾರೆ.