ಜೇಮ್ಸ್ ಬಗ್ಗೆ ಹೊಸ ಅಪ್ ಡೇಟ್: ಪುನೀತ್ ಅಭಿಮಾನಿಗಳಿಗೆ ಗುಡ್ ನ್ಯೂಸ್

ಬೆಂಗಳೂರು| Krishnaveni K| Last Modified ಶುಕ್ರವಾರ, 14 ಜನವರಿ 2022 (09:29 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ನಟಿಸಿದ್ದ ಜೇಮ್ಸ್ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಈ ಚಿತ್ರ ಶೂಟಿಂಗ್ ಹಂತದಲ್ಲಿರುವಾಗಲೇ ಪುನೀತ್ ಸಾವನ್ನಪ್ಪಿದ್ದರು. ಹೀಗಾಗಿ ಡಬ್ಬಿಂಗ್ ನಡೆಸುವುದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿದೆ. ಆದರೂ ಪುನೀತ್ ಅಭಿಮಾನಿಗಳಿಗಾಗಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ರಯತ್ನ ನಡೆಸಿದೆ.


ಇದೀಗ ಜನವರಿ 26 ರಂದು ಚಿತ್ರದ ಅಧಿಕೃತ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕೊರೋನಾ ಕಾರಣದಿಂದ ಪುನೀತ್ ಬರ್ತ್ ಡೇ ದಿನ ಚಿತ್ರ ಬಿಡುಗಡೆಯಾಗುವುದು ಅನುಮಾನ. ಆದರೆ ಪೋಸ್ಟರ್ ಮೂಲಕ ಚಿತ್ರದ ಬಗ್ಗೆ ಅಪ್ ಡೇಟ್ ಸಿಕ್ಕಿದೆ.


ಇದರಲ್ಲಿ ಇನ್ನಷ್ಟು ಓದಿ :