ಮುಂಬೈ: ಇತ್ತೀಚೆಗೆ ಬಾಲಿವುಡ್ ನಟರಿಗೆ ಬಹಿಷ್ಕಾರದ ಭೀತಿ ಒಂದೆಡೆಯಾದರೆ, ದಕ್ಷಿಣ ಭಾರತದ ಸಿನಿಮಾಗಳ ಕಾಟ ಇನ್ನೊಂದೆಡೆ.ಹಿಂದೆ ನೀಡಿದ್ದ ಹಿಂದೂ ವಿರೋಧಿ, ದೇಶ ವಿರೋಧಿ ಹೇಳಿಕೆಗಳು ಬಾಲಿವುಡ್ ಸ್ಟಾರ್ ಗಳಿಗೆ ಈಗ ಮುಳುವಾಗುತ್ತಿದೆ. ಅಂತಹ ನಟರ ಚಿತ್ರಗಳು ಬಿಡುಗಡೆಗೂ ಮುನ್ನವೇ ಬಹಿಷ್ಕಾರದ ಭೀತಿ ಎದುರಿಸುತ್ತಿವೆ. ಇದರಿಂದಾಗಿ ಈಗಾಗಲೇ ಅಮೀರ್ ಖಾನ್, ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಸೇರಿದಂತೆ ಎಲ್ಲರೂ ಬೆನ್ನು ಬೆನ್ನಿಗೆ ಸೋಲು ಕಂಡಿದ್ದಾರೆ.ಇದರ ನಡುವೆ ಬಾಲಿವುಡ್ ಸ್ಟಾರ್ ಗಳಿಗೆ ಈಗ