ಬೆಂಗಳೂರು: ಇತ್ತೀಚೆಗೆ ಕನ್ನಡ ಭಾಷೆಗೆ ಅವಮಾನ ಮಾಡಿದ್ದ ಗೂಗಲ್ ಇದೀಗ ಕನ್ನಡದ ವರನಟ ಡಾ. ರಾಜ್ ಕುಮಾರ್ ಗೇ ಅವಮಾನ ಮಾಡಿರುವುದಾಗಿ ವರದಿಯಾಗಿದೆ. ತಮಿಳಿನ ವಿಕ್ರಮ್ ವೇದ ಸಿನಿಮಾ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಕೊಟ್ಟರೆ ಸಿನಿಮಾ ಪಾತ್ರವರ್ಗದವರ ಲಿಸ್ಟ್ ನಲ್ಲಿ ಡಾ. ರಾಜ್ ಹೆಸರೂ ಇದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ.ಫೋಟೋ ಕೆಳಗೆ ಡಾ.ರಾಜ್ ಹೆಸರು ಹಾಕಿ ಅವರ ಪಾತ್ರವನ್ನು ಹಾಫ್ ಬಾಯಿಲ್ಡ್ (ಅರೆಬೆಂದ ಪಾತ್ರ) ಎಂದು ಅವಮಾನ ಮಾಡಲಾಗಿದೆ.