ಅಪಾರ ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ!

ಬೆಂಗಳೂರು| Ramya kosira| Last Modified ಗುರುವಾರ, 25 ನವೆಂಬರ್ 2021 (20:02 IST)


ನಟ ಪುನೀತ್ ರಾಜ್ ಕುಮಾರ್ ನಮ್ಮನ್ನೆಲ್ಲಾ ಅಗಲಿದ್ದರೂ ಅವರ ಮೇಲಿನ ಅಪಾರ ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ.
ಈಗಲೂ ಸಹ ಅಪ್ಪು ಸಮಾಧಿ ನೋಡಲು ದೂರದ ಊರುಗಳಿಂದ ಅಭಿಮಾನಿ ದೇವರುಗಳು ಬರುತ್ತಿದ್ದಾರೆ. ಅದರಂತೆ ಇಲ್ಲೊಬ್ಬ ಅಪ್ಪು ಅಭಿಮಾನಿ ಶಬರಿಮಲೆಗೆ ಅಪ್ಪು ಪೋಟೋ ಹಿಡಿದು ತೆರಳಿದ್ದಾನೆ. ತಲೆ ಮೇಲೆ ಇರುಮುಡಿ ಹೊತ್ತು ಕೈಯಲ್ಲಿ ಅಪ್ಪು ಭಾವಚಿತ್ರ ಹಿಡಿದು ಸ್ವಾಮಿಯೇ ಅಯ್ಯಪ್ಪ ಅನ್ನುತ್ತ ಶಬರಿಮಲೆ ದೇಗುಲದ 18 ಮೆಟ್ಟಿಲು ಹತ್ತಿದ್ದಾನೆ. ಇನ್ನು ಅಪ್ಪು ಸಹ ಅವರ ಜೀವಿತಾವಧಿಯಲ್ಲಿ ಪ್ರತಿ ವರ್ಷ ಶಬರಿಮಲೆಗೆ ಹೋಗುತ್ತಿದ್ದರು. ಸದ್ಯ ಅಭಿಮಾನಿ ಅಪ್ಪು ಪೋಟೋ ಹಿಡಿದು ಶಬರಿಮಲೆ ಮೆಟ್ಟಿಲು ಹತ್ತುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.


ಇದರಲ್ಲಿ ಇನ್ನಷ್ಟು ಓದಿ :