ಬೆಂಗಳೂರು: ಗಾನಗಂಧರ್ವ ಎಸ್ ಪಿ ಬಾಲಸುಬ್ರಮಣ್ಯಂ ಶೀಘ್ರ ಚೇತರಿಕೆಗೆ ಇಡೀ ದೇಶವೇ ಪ್ರಾರ್ಥನೆ ಮಾಡುತ್ತಿದೆ. ಕನ್ನಡ ನಾಡಿನಲ್ಲೂ ಈ ಗಾನ ಗಾರುಡಿ ಬಗ್ಗೆ ಪ್ರಾರ್ಥನೆಗಳು ನಡೆಯುತ್ತಲೇ ಇವೆ. ಸಂಗೀತ ನಿರ್ದೇಶಕ ಹಂಸಲೇಖ, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಆಂಕರ್ ಅನುಶ್ರೀ, ಅರ್ಜುನ್ ಜನ್ಯಾ ಜೀ ಕನ್ನಡದ ಸರಿಗಮಪ ವೇದಿಕೆಯಿಂದ ಫೇಸ್ ಬುಕ್ ಲೈವ್ ನಡೆಸಿ ಎಸ್ ಪಿಬಿ ಚೇತರಿಕೆಗಾಗಿ ಪ್ರಾರ್ಥನೆ ನಡೆಸಿದ್ದಾರೆ. ಜತೆಗೆ ಎಸ್ ಪಿಬಿಗಾಗಿ ಒಂದು ನಿಮಿಷ ಎಲ್ಲರೂ