ಕನ್ನಡ್ ಗೊತ್ತಿಲ್ಲ ಟ್ರೈಲರ್ ಇಂದು ಬಿಡುಗಡೆ

ಬೆಂಗಳೂರು| Krishnaveni K| Last Modified ಶನಿವಾರ, 26 ಅಕ್ಟೋಬರ್ 2019 (09:17 IST)
ಬೆಂಗಳೂರು: ನಟಿ ಹರಿಪ್ರಿಯಾ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ಸಿನಿಮಾ ಟ್ರೈಲರ್ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.

 
ಸಿನಿಮಾದ ಟ್ರೈಲರ್ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದಿದ್ದ ಅಭಿಮಾನಿಗಳಿಗೆ ಚಿತ್ರತಂಡ ಖುಷಿಯಾಗುವ ಸುದ್ದಿ ನೀಡಿದ್ದು, ಇಂದು ಸಂಜೆ 6.30 ಕ್ಕೆ ಲಾಂಚ್ ಮಾಡುವುದಾಗಿ ಹೇಳಿದೆ.
 
ಕನ್ನಡ್ ಗೊತ್ತಿಲ್ಲ ಸಿನಿಮಾದಲ್ಲಿ ಹರಿಪ್ರಿಯಾ ಜತೆಗೆ ಸುಧಾರಾಣಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಘು ದೀಕ್ಷಿತ್ ಹಾಡಿದ ಕನ್ನಡ ಭಾಷೆಯ ಕುರಿತಾದ ಹಾಡು ಈಗಾಗಲೇ ಜನಪ್ರಿಯವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :