ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ವಾಂಟೆಡ್ ನಟಿ ಎನಿಸಿಕೊಂಡಿರುವ ಹರಿಪ್ರಿಯಾ ಕುರುಕ್ಷೇತ್ರ ಸಿನಿಮಾದ ಅಡಿಯೋ ಹಿಟ್ ಆದ ಖುಷಿಯಲ್ಲಿದ್ದಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೋಡಿಯಾಗಿ ಹರಿಪ್ರಿಯಾ ನಟಿಸಿದ್ದ ಜುಮ್ಮಾ ಜುಮ್ಮ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್ ವ್ಯೂ ದಾಟಿ ದಾಖಲೆ ಮಾಡಿದೆ. ಇದನ್ನು ನೋಡಿ ಖುಷಿ ಆಗಿರುವ ಹರಿಪ್ರಿಯಾ ಈ ಸಿನಿಮಾ ಮೂಲಕ ತಮ್ಮ ಎರಡು ಕನಸು ಈಡೇರಿತು ಎಂದಿದ್ದಾರೆ.ಹರಿಪ್ರಿಯಾಗೆ ತಾವೊಂದು ಪೌರಾಣಿಕ ಸಿನಿಮಾದಲ್ಲಿ ನಟಿಸಬೇಕು