ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಕನ್ನಡ ಭಾಷೆ ವಿಚಾರವಾಗಿ ಸಿನಿಮಾ ನಟ, ನಟಿಯರು ಟ್ರೋಲ್ ಗೊಳಗಾಗುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಸಮಯದಲ್ಲಿ ಹರಿಪ್ರಿಯಾ ತಮ್ಮ ಕನ್ನಡಾಭಿಮಾನವನ್ನು ಪತ್ರದ ಮೂಲಕ ಬರೆದು ತೋರಿಸಿದ್ದಾರೆ.ಆಗಾಗ ತಮಗೆ ಕನ್ನಡದಲ್ಲಿ ಮಾತನಾಡಿ, ಕನ್ನಡದಲ್ಲಿ ಬರೆಯಿರಿ ಎಂದೆಲ್ಲಾ ಕಾಮೆಂಟ್ ಮಾಡುವ ಅಭಿಮಾನಿಗಳಿಗೆ ಸುದೀರ್ಘವಾಗಿ ತಮ್ಮದೇ ಕೈ ಬರಹದಲ್ಲಿ ಪತ್ರ ಬರೆದು ಅದನ್ನು ಟ್ವೀಟ್ ಮಾಡಿದ್ದಾರೆ.ನನಗೆ ಕನ್ನಡ ಓದಲು ಬರೆಯಲು ಬರುತ್ತದೆ. ಕನ್ನಡದಲ್ಲಿ ಉತ್ತಮ ಅಂಕಗಳಿಸುತ್ತಿದ್ದೆ. ಕನ್ನಡ ಭಾಷೆ, ಭಾಷಾಭಿಮಾನಿಗಳ