ಬೆಂಗಳೂರು: ನಟ-ನಟಿಯರಿಗೆ ಕಾರಿನ ಹುಚ್ಚು ತುಸು ಜಾಸ್ತಿ ಎಂದೆನ್ನಬಹುದೇನು. ಇತ್ತೀಚೆಗೆ ಸಿನಿಮಾ ತಾರೆಯರು ಒಬ್ಬರ ನಂತರ ಒಬ್ಬರು ಕಾರು ಖರೀದಿಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಕನ್ನಡದ ರಾಜಾಹುಲಿ ಯಶ್ 3 ಬೆಂಜ್ ಕಾರು ಖರೀದಿಸಿದ್ದರು. ಇದಕ್ಕೂ ಮೊದಲು ನಟ ಚೇತನ್ ಚಂದ್ರ ‘ಆಡಿ’ ಕಾರು ಖರೀದಿಸಿದ್ದರು. ಈಗ ನಟಿ ಹರಿಪ್ರಿಯಾ ತಮ್ಮಿಷ್ಟದ ಜಾಗ್ವಾರ್ ಕಾರು ಖರೀದಿಸಿದ್ದಾರೆ.