Widgets Magazine

ಚುನಾವಣೆ ಅಖಾಡಕ್ಕಿಳಿದ ಬಾಲಿವುಡ್ ನಟಿಯ ಸಹೋದರ

ಮುಂಬೈ| Jagadeesh| Last Modified ಶನಿವಾರ, 17 ಅಕ್ಟೋಬರ್ 2020 (18:43 IST)
ಬಾಲಿವುಡ್ ನಟಿಯ ಸಹೋದರರೊಬ್ಬರು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

ನಟಿ ಸೋನಾಕ್ಷಿ ಸಿನ್ಹಾ ಅವರ ಸಹೋದರ ಲುವ್ ಸಿನ್ಹಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 

ಸೋನಾಕ್ಷಿ ಸಿನ್ಹಾ ತಮ್ಮ ಸಹೋದರ ಲುವ್ ಸಿನ್ಹಾ ಅವರ ರಾಜಕೀಯ ಜೀವನಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಮುಂಬರುವ ಬಿಹಾರ ಚುನಾವಣೆಯಲ್ಲಿ ಲುವ್ ಪಾಟ್ನಾದಿಂದ ಕಾಂಗ್ರೆಸ್ ಟಿಕೆಟ್‌ ಪಡೆದು ಸ್ಪರ್ಧಿಸಿದ್ದಾರೆ.

" # ಬಿಹಾರ ಎಲೆಕ್ಷನ್‌ಗೆ ನಾಮನಿರ್ದೇಶನ ಮಾಡಿದ ನನ್ನ ದೊಡ್ಡಣ್ಣ @ ಲುವ್‌ಸಿನ್ಹಾ ಅವರ ಬಗ್ಗೆ ತುಂಬಾ ಹೆಮ್ಮೆ ಇದೆ! ನಮ್ಮ ದೇಶಕ್ಕಾಗಿ ಹೆಜ್ಜೆ ಹಾಕಲು ನಮಗೆ ನಿಜವಾಗಿಯೂ ಯುವಕರು ಮತ್ತು ಹೆಚ್ಚು ಒಳ್ಳೆಯ ಜನರು ಬೇಕು ಮತ್ತು ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದು ತುಂಬಾ ಸಂತೋಷವಾಗಿದೆ! ಶುಭವಾಗಲಿ ಸಹೋದರ" ಎಂದು ಟ್ವಿಟ್ ಮಾಡಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :