ದಾವಣಗೆರೆ: ಡಾಲಿ ಧನಂಜಯ್ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿ ನಟಿಸಿರುವ ಹೆಡ್ ಬುಷ್ ಸಿನಿಮಾ ಪ್ರಿ ರಿಲೀಸ್ ಈವೆಂಟ್ ಇಂದು ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಡೆಯಲಿದೆ.ಅಗ್ನಿಶ್ರೀಧರ್ ನಿರ್ದೇಶಿಸಿರುವ ಡಾನ್ ಜಯರಾಜ್ ಕುರಿತಾದ ಅಂಡರ್ ವರ್ಲ್ಡ್ ಕತೆಯಾಧಾರಿತ ಹೆಡ್ ಬುಷ್ ಸಿನಿಮಾ ಅಕ್ಟೋಬರ್ 21 ಕ್ಕೆ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.ದಾವಣಗೆರೆಯಲ್ಲಿ ಇಂದು ಅದ್ಧೂರಿಯಾಗಿ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮ ನಡೆಯಲಿದ್ದು, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಡಿಂಪಲ್ ಕ್ವೀನ್ ರಚಿತಾ ರಾಮ್ ಆಗಮಿಸುತ್ತಿದ್ದಾರೆ.