ಸೋಶಿಯಲ್ ಮೀಡಿಯಾದಲ್ಲಿ ಕೋಟ್ಯಂತರ ಜನರು ಪುನೀತ್ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ. ಶ್ರದ್ಧಾಂಜಲಿ ಸಲ್ಲಿಸುತ್ತ, ಅಪ್ಪು ಬಗೆಗಿನ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ ಈ ನಡುವೆ ಪುನೀತ್ ಅವರದ್ದು ಎಂದು ಹೇಳಲಾದ ಒಂದು ವಿಡಿಯೋ ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾ ಹಾಗೂ ಎಲ್ಲರ ಮೊಬೈಲ್ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಆದರೆ ಅದು ಪುನೀತ್ ಅವರ ವಿಡಿಯೋ ಅಲ್ಲ! ಕೆಲವು ತಿಂಗಳ ಹಿಂದೆ ಬೆಂಗಳೂರಿನ ಜಿಮ್ವೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯಾಘಾತ ಆಗಿತ್ತು. ವರ್ಕೌಟ್ ಮಾಡುತ್ತಿದ್ದಾಗ ಅವರಿಗೆ ಎದೆನೋವು