ಶಿವಮೊಗ್ಗದಲ್ಲಿ ಎರಡು ಚಿತ್ರಮಂದಿರಗಳಲ್ಲಿ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರ ಬಿಡುಗಡೆಯಾಗಿದೆ. ಗೋಪಿ ಸರ್ಕಲ್ ಬಳಿಯ ಎಚ್ಪಿಸಿಯಲ್ಲಿ ಮುಂಜಾನೆ ಎರಡು ಗಂಟೆಗೆ ಅಭಿಮಾನಿಗಳ ಶೋ ಇತ್ತು. ಆ ನಂತರ 6 ಗಂಟೆಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಈ ಸಂದರ್ಭದಲ್ಲಿ ಚಿತ್ರಮಂದಿರದ ಒಳಗಿನ ಸೂಚನಾ ಫಲಕ ಹಾಗೂ ಗಾಜುಗಳು ಚೂರಾಗಿವೆ. ನಗರದ ಮಂಜುನಾಥ ಥಿಯೇಟರ್ನಲ್ಲೂ ಸಿನಿಮಾ ಬಿಡುಗಡೆಯಾಗಿ ಹೌಸ್ಫುಲ್ ಆಗಿದೆ. ಇನ್ನು ಸಾಗರದ ಶ್ರೀ ಸಿನಿಮಾ