ಆಕ್ಷನ್ ಸಿನಿಮಾಗಳಲ್ಲಿ ನಾಯಕಿಯರು ಹೆಚ್ಚಾಗಿ ಕಾಣಿಸಿಕೊಳ್ಳಬೇಕು- ಅನುಷ್ಕಾ ಶರ್ಮಾ

Navya K M| Last Updated: ಬುಧವಾರ, 29 ಜೂನ್ 2016 (09:10 IST)
ಬಾಲಿವುಡ್‌ನಲ್ಲಿ ಸಿನಿಮಾ ನಾಯಕರು ಕಾಣಿಸಿಕೊಳ್ಳುವ ಹಾಗೇ ವಿಭಿನ್ನವಾದ ಪಾತ್ರಗಳಲ್ಲಿ ನಾಯಕಿಯರು ಕಾಣಿಸಿಕೊಳ್ಳೋದು ಕಡಿಮೆ. ಬಾಲಿವುಡ್ ಹೀರೋಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್, ಹೃತಿಕ್ ರೋಷನ್ ಹೀಗೆ ನಾಯಕರು ತಮ್ಮ ಒಂದು ಸಿನಿಮಾಕ್ಕಿಂತ ಒಂದು ಸಿನಿಮಾದಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದ್ರೆ ನಾಯಕರಿಗೆ ಹೋಲಿಸಿದ್ರೆ ನಾಯಕಿಯರು ವೈವಿಧ್ಯಮವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳೋದು ಕಡಿಮೆ.
ಆ ನಟಿ ಅನುಷ್ಕಾ ಶರ್ಮಾ ಅವರು ಮಾತ್ರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತೆ. ಯಾಕಪ್ಪಾ ಅಂದ್ರೆ ಸದ್ಯ ಸುಲ್ತಾನ್ ಸಿನಿಮಾದಲ್ಲಿ ಕುಸ್ತಿಪಟುವಾಗಿ ಕಾಣಿಸಿಕೊಂಡಿರುವ ಅನುಷ್ಕಾ ಶರ್ಮಾ ಬಾಲಿವುಡ್ ನ ಇತರೆ ನಟಿಯರಿಗೆ ಸಲಹೆಯೊಂದನ್ನು ನೀಡಿದ್ದಾರೆ. ಮಹಿಳಾ ನಾಯಕಿಯರು ಆಕ್ಷನ್ ಸಿನಿಮಾಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳಬೇಕು. ಕೇವಲ ರೋಮ್ಯಾಂಟಿಕ್ ಪಾತ್ರಗಳನ್ನು ಮಾತ್ರವಲ್ಲದೇ ಆಕ್ಷನ್ ಪಾತ್ರಗಳನ್ನು ನಿರ್ವಹಿಸಿದ್ರೆ ಚೆನ್ನಾಗಿರುತ್ತೆ ಅಂತಾ ಅನುಷ್ಕಾ ಶರ್ಮಾ ಅವರು ಹೇಳಿದ್ದಾರೆ.ಅದು ತುಂಬಾನೇ ಚೆನ್ನಾಗಿರುತ್ತೆ ಅಲ್ಲದೇ ನಾವು ಸಾಕಷ್ಟು ಎಂಜಾಯ್ ಮಾಡ್ಬಹುದು ಅಂತಾ ಅವರು ಹೇಳಿದ್ದಾರೆ.
 
ಇನ್ನು ಸುಲ್ತಾನ್ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಹೇಲಿರುವ ಅನುಷ್ಕಾ ಶರ್ಮಾ ನಾನು ಪಾತ್ರಕ್ಕಾಗಿ ಸಾಕಷ್ಟು ಕಸರತ್ತುಗಳನ್ನು ಮಾಡಿದ್ದೇನೆ.ಅದಕ್ಕಾಗಿ ನಾನು ಸಾಕಷ್ಟು ಓದಿದ್ದೇನೆ. ಒಂದಷ್ಟು ಅಧ್ಯಯನ ಕೂಡ ಮಾಡಿದ್ದೇನೆ. ಹಾಗಾಗಿ ಸಿನಿಮಾದಲ್ಲಿ ನನ್ನ ಪಾತ್ರದ ಬಗ್ಗೆ ಅಭಿಮಾನಿಗಳು ಯಾವ ರೀತಿ ರೆಸ್ಪಾನ್ಸ್ ಮಾಡ್ಬಹುದು ಅನ್ನೋ ಕುತೂಹಲ ನನ್ನಲ್ಲಿ ಬಹಳಷ್ಟಿದೆ ಅಂತಾ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :