ಬೆಂಗಳೂರು: ಸ್ಯಾಂಡಲ್ ವುಡ್ ನ ಸೂಪರ್ ಜೋಡಿ ಐಂದ್ರಿತಾ ರೇ ಮತ್ತು ದಿಗಂತ್ ಮೊನ್ನೆಯಷ್ಟೇ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಈ ಜೋಡಿ ತಾವಿಬ್ಬರೂ ಲವ್ ಮಾಡಿದ್ದು ಹೇಗೆ ಎಂದು ಬಿಚ್ಚಿಟ್ಟಿದ್ದಾರೆ.ಮನಸಾರೆ ಸಿನಿಮಾದಲ್ಲಿ ಈ ಜೋಡಿ ಜತೆಯಾಗಿ ನಟಿಸಿತ್ತು. ಅದೇ ಸಂದರ್ಭದಲ್ಲಿ ತಮ್ಮಿಬ್ಬರ ನಡುವೆ ಪ್ರೇಮಾಂಕುರವಾಯಿತು ಎಂಬುದನ್ನು ಇದೀಗ ದಿಗಂತ್ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಆ ಸಂದರ್ಭದಲ್ಲಿಯೇ ತಾನು ಪ್ರಪೋಸ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.ಮನಸಾರೆ ಶೂಟಿಂಗ್