ನವದೆಹಲಿ: ಹರ್ಯಾಣದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಮನೂಷಿ ಚಿಲ್ಲರ್ 2017 ರ ವಿಶ್ವಸುಂದರಿ ಸ್ಪರ್ಧೆ ಗೆದ್ದಿದ್ದಾರೆ. 17 ವರ್ಷಗಳ ನಂತರ ಭಾರತಕ್ಕೆ ಈ ಕಿರೀಟ ಒಲಿದಿದೆ. ಇದಕ್ಕೂ ಮೊದಲು ಪ್ರಿಯಾಂಕ ಚೋಪ್ರಾ ಕೊನೆಯದಾಗಿ ಈ ಪ್ರಶಸ್ತಿ ಪಡೆದಿದ್ದರು. ಅಷ್ಟಕ್ಕೂ ಮಾನುಷಿ ಈ ಪ್ರಶಸ್ತಿ ಗೆಲ್ಲಲು ಕಾರಣವಾದ ಆ ಪ್ರಶ್ನೆ ಏನಾಗಿತ್ತು ಗೊತ್ತಾ?ತೀರ್ಪುಗಾರರು ಆಕೆಗೆ ಅತೀ ಹೆಚ್ಚು ಸಂಭಾವನೆ ಪಡೆಯಲು ಯಾರು ಹೆಚ್ಚು ಅರ್ಹರು ಮತ್ತು ಯಾಕೆ? ಎಂದು ಪ್ರಶ್ನಿಸಿದ್ದರು.