‘ಸಲಾರ್’ ಚಿತ್ರದಲ್ಲಿ ನಟಿಸಲು ಪ್ರಶಾಂತ್ ನೀಲ್ ಆಯ್ಕೆ ಮಾಡಿದ ನಟರೆಷ್ಟು ಮಂದಿ ಗೊತ್ತಾ?

ಹೈದರಾಬಾದ್| pavithra| Last Modified ಸೋಮವಾರ, 22 ಫೆಬ್ರವರಿ 2021 (07:57 IST)
ಹೈದರಾಬಾದ್ : ಟಾಲಿವುಡ್ ಸ್ಟಾರ್ ನಟ ಪ್ರಭಾಸ್ ಪ್ರಸ್ತುತ ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರೊಂದಿಗೆ ‘ಸಲಾರ್’ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥೆಯ ಈ ಚಿತ್ರದಲ್ಲಿ 100 ನಟರನ್ನು ಆಯ್ಕೆ ಮಾಡಲಾಗಿದೆಯಂತೆ.

ಆಡಿಷನ್ ನಂತರ ಪ್ರಶಾಂತ್ ನೀಲ್ ಮತ್ತು ತಂಡವು ಪ್ರಭಾಸ್ ಮತ್ತು ನಟಿ ಶ್ರುತಿ ಹಾಸನ್ ಅಭಿನಯದ ಆಕ್ಷನ್ ಚಿತ್ರ ಸಲಾರ್  ಚಿತ್ರಕ್ಕಾಗಿ ಸುಮಾರು 100 ನಟರನ್ನು ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಶಾಂತ್ ನೀಲ್  ಅವರ ಈ ಚಿತ್ರದಲ್ಲಿ  ಪ್ರಭಾಸ್ ಮುಖ್ಯ ಪಾತ್ರವನ್ನು ಮಾಡುತ್ತಿದ್ದಾರೆ. ಕನ್ನಡ ನಟ ಮಧು ಗುರುಸ್ವಾಮಿ ಖಳನಾಯಕನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗಿದೆ.
         


ಇದರಲ್ಲಿ ಇನ್ನಷ್ಟು ಓದಿ :