ಮಂಗಳೂರು : ಚುನಾವಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಮುನಿರತ್ನ ಅವರು ಜನರಿಗೆ ಕುಕ್ಕರ್ ಹಾಗೂ ನೀರಿನ ಕ್ಯಾನ್ ಹಂಚಿರುವ ಕಾರಣದಿಂದ ನಟ, ನಿರ್ದೇಶಕ ಹುಚ್ಚ ವೆಂಕಟ್ ಅವರು ಶಾಸಕರ ವಿರುದ್ದ ಸಿಡಿದೆದ್ದಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಕ್ಯಾನ್ ಮೇಲೆ ಮುನಿರತ್ನ ಫೋಟೋ ಹಾಕಿದ್ದಾರೆ. ನೀರು ಕೊಡ್ತಾ ಇರೋದು ದೇವ್ರು, ಅದು ಕೊಡೋಕೆ ಅವನ್ಯಾರು? ಇವನ ಫೋಟೋ ಇರೋ ಬಾಟಲ್ ನೀರು ನಾವ್ ಕುಡಿಬೇಕಾ?