ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು ಕೋಹಿನೂರ್ ವಜ್ರ ಎಂದು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿವರ್ಣಿಸಿದ್ದಾರೆ. ದಕ್ಷಿಣ ಭಾರತ ಕಲಾವಿದರ ನೇತೃತ್ವದಲ್ಲಿ ನಡೆದ ಜಯಲಲಿತಾ ಮತ್ತು ಪ್ರಮುಖ ರಾಜಕೀಯ ವಿಶ್ಲೇಷಕ, ಪತ್ರಕರ್ತ ಚೋ ರಾಮಸ್ವಾಮಿ ಸಂತಾಪ ಸೂಚಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಪುರುಷ ಪ್ರಧಾನ ಜಗತ್ತಿನಲ್ಲಿ ಜಯಲಲಿತಾ ಅದೆಷ್ಟೋ ಕಷ್ಟಗಳನ್ನು, ಸವಾಲುಗಳನ್ನು ಎದುರಿಸಿದ್ದಾರೆ. 1996ರ ಚುನಾವಣೆಯಲ್ಲಿ ಜಯಲಲಿತಾ ವಿರುದ್ಧ ತಾನು ಕೊಟ್ಟಿದ್ದ ಹೇಳಿಕೆಯನ್ನು ನೆನಪಿಸಿಕೊಂಡರು. ನಾನು