ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಮುಖ್ಯ ವಿಚಾರ ಹೇಳಿದ್ದಾರೆ! ಏನದು ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 4 ಜುಲೈ 2018 (09:00 IST)
ಬೆಂಗಳೂರು: ಸೆಲೆಬ್ರಿಟಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್ ಓಪನ್ ಮಾಡಿ ಇಲ್ಲ ಸಲ್ಲದ್ದನ್ನು ಬರೆಯುವ ಹಾವಳಿ ಇತ್ತೀಚೆಗೆ ಜೋರಾಗಿದೆ. ಅಂತಹವರಿಗೆ ಪುನೀತ್ ರಾಜ್ ಕುಮಾರ್ ವಿಶೇಷ ಅನೌನ್ಸ್ ಮೆಂಟ್ ಮಾಡಿದ್ದಾರೆ.


ಟ್ವಿಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಒಂದು ಖಾತೆಯಿದೆ. @PuneethOfficial
ಹೆಸರಿನ ಈ ಟ್ವಿಟರ್ ಖಾತೆ ನಿಜವಾಗಿಯೂ ಪುನೀತ್ ಅವರದ್ದು ಅಂದುಕೊಂಡು ಎಷ್ಟೋ ಜನ ಇದರಲ್ಲಿ ಬರುವ ಮೆಸೇಜ್ ಗಳನ್ನು ನಂಬಿ ರಿಟ್ವೀಟ್, ರಿಪ್ಲೈ ಮಾಡುತ್ತಾರೆ.


ಆದರೆ ಇದು ಪುನೀತ್ ಅಧಿಕೃತ ಖಾತೆಯಲ್ಲ. ಅಸಲಿಗೆ ಪುನೀತ್ ರಾಜ್ ಕುಮಾರ್ ಯಾವುದೇ ಟ್ವಿಟರ್ ಖಾತೆಯನ್ನೇ ಹೊಂದಿಲ್ಲ. ಯಾರೋ ಅವರ ಹೆಸರು ಹೇಳಿಕೊಂಡು ಖಾತೆ ಓಪನ್ ಮಾಡಿ ಸಂದೇಶ ಬರೆದುಕೊಳ್ಳುತ್ತಿದ್ದಾರೆ.


ಹೀಗಾಗಿ ಅಭಿಮಾನಿಗಳು ಪುನೀತ್ ಪರವಾಗಿ ಟ್ವಿಟರ್ ನಲ್ಲಿ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ದಯವಿಟ್ಟು, ಈ ಖಾತೆಯ ಟ್ವಿಟರ್ ಪುನೀತ್ ರದ್ದೆಂದು ನಂಬಿ ಪ್ರತಿಕ್ರಿಯಿಸಬೇಡಿ. ಇದು ಪುನೀತ್ ರ ಅಧಿಕೃತ ಟ್ವಿಟರ್ ಖಾತೆಯಲ್ಲ. ಇದು ನಕಲಿ ಎಂದು ಘೋಷಣೆ ಮಾಡಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.






ಇದರಲ್ಲಿ ಇನ್ನಷ್ಟು ಓದಿ :