ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿರುವ ಡ್ರಗ್ ಕೇಸ್ ನಲ್ಲಿ ಘಟನಾನುಘಟಿ ನಾಯಕರ ಮಕ್ಕಳಿದ್ದು, ಈ ವಿಷಯವನ್ನು ಡೈವರ್ಟ್ ಮಾಡಲಾಗುತ್ತಿದೆ. ಡ್ರಗ್ಸ್ ಮಾಫಿಯಾದಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಮಕ್ಕಳಿದ್ದಾರೆ. ಸಿನಿಮಾ ನಟರೂ ಇದ್ದಾರೆ. ಆದರೆ ದೊಡ್ಡವರ ತನಿಖೆಗೆ ಮುಂದಾಗದೇ ಇಲ್ಲದೇ ಇರೋರ ವಿಚಾರಣೆ ನಡೆಸಲಾಗುತ್ತಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅಸಮಧಾನ ವ್ಯಕ್ತಪಡಿಸಿದ್ದಾರೆ. ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ನಿಷ್ಪಕ್ಷಪಾತ ತನಿಖೆಗೆ ಕಾಣದ ಕೈಗಳು ಕಟ್ಟಿಹಾಕಿದಂತಿವೆ