ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸೆಲೆಬ್ರಿಟಿಗಳ ವಿರುದ್ಧ ಮಾತನಾಡಿ ಭಾರೀ ಸುದ್ದಿಯಾಗಿದ್ದ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಮಾಧ್ಯಮಗಳ ಮುಂದೆ ಮಾತನಾಡಿರುವ ಇಂದ್ರಜಿತ್ ಈ ವಂಚನೆ ಪ್ರಕರಣ ಆಗುವ ಕೆಲವು ದಿನಗಳ ಮುಂಚೆ ಮೈಸೂರಿನಲ್ಲಿ ಸ್ಟಾರ್ ಹೋಟೆಲ್ ನಲ್ಲಿ ಒಬ್ಬ ಬಡಪಾಯಿ ಸಪ್ಲೈಯರ್ ಮೇಲೆ ಹಲ್ಲೆ ನಡೆದಿದೆ. ಮರುದಿನ ಆತನ ಹೆಂಡತಿ ಪೊಲೀಸರಿಗೆ ದೂರು ನೀಡಲು ಹೊರಟಾಗ ಇದೇ ದರ್ಶನ್