ಬೆಂಗಳೂರು : ಡಾಲಿ ಧನಂಜಯ್ ನಟಿಸಿರುವ ಬಹು ನಿರೀಕ್ಷಿತ ಭೈರವ ಗೀತಾ ಚಿತ್ರದಲ್ಲಿ ಗೌರಮ್ಮನಂತೆ ಕಾಣಿಸಿಕೊಂಡ ನಟಿ ಇರಾ ಇದೀಗ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ಭೈರವಾ ಗೀತಾ ಚಿತ್ರದಲ್ಲಿ ಆಯಕ್ಷನ್ ಥ್ರೀಲ್ಲರ್ ಸ್ಟೋರಿಯ ಜೊತೆಗೆ ಒಂದು ಸುಂದರವಾದ ಲವ್ ಸ್ಟೋರಿ ಇದೆ. ಈ ಚಿತ್ರದಲ್ಲಿ ಧನಂಜಯ್ ಗೆ ನಾಯಕಿಯಾಗಿ ಇರಾ ನಟಿಸಿದ್ದು, ಈ ಚಿತ್ರದ ಟೀಸರ್ ಇತ್ತಿಚೆಗೆ ರಿಲೀಸ್ ಆಗಿತ್ತು. ಇದರಲ್ಲಿ ಇರಾ ಪಕ್ಕಾ ಗೌರಮ್ಮನಂತೆ ಕಾಣಿಸಿಕೊಂಡಿದ್ದಾರೆ.