ಹೈದರಾಬಾದ್: ನಟಿ ರಶ್ಮಿಕಾ ಮಂದಣ್ಣ ಗೆಳೆಯ ವಿಜಯ್ ದೇವರಕೊಂಡ ಜೊತೆ ನ್ಯೂ ಇಯರ್ ನಿಮಿತ್ತ ಟೂರ್ ಮಾಡುತ್ತಿದ್ದಾರಾ? ರಶ್ಮಿಕಾ ಲೇಟೆಸ್ಟ್ ವಿಡಿಯೋವೊಂದನ್ನು ನೋಡಿದ ಅಭಿಮಾನಿಗಳು ಇಂತಹದ್ದೊಂದು ಅನುಮಾನ ವ್ಯಕ್ತಪಡಿಸಿದ್ದಾರೆ.ರಶ್ಮಿಕಾ ಇತ್ತೀಚೆಗೆ ಹೊಸ ವರ್ಷದಂದು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿಡಿಯೋ ಪ್ರಕಟಿಸಿದ್ದರು. ಹಚ್ಚ ಹಸಿರಿನ ನಡುವೆ ರೆಸಾರ್ಟ್ ನಂತಹ ಜಾಗದಲ್ಲಿ ರಶ್ಮಿಕಾ ಖುಷಿಯಿಂದ ನಡೆದಾಡುತ್ತಿರುವ ವಿಡಿಯೋ ಪ್ರಕಟಿಸಿದ್ದರು.ಈ ವಿಡಿಯೋ ನೋಡಿದ ನೆಟ್ಟಿಗರು ಈ ವಿಡಿಯೋವನ್ನು ವಿಜಯ್ ದೇವರಕೊಂಡ ಚಿತ್ರೀಕರಿಸಿದ್ದಾರೆ ಎಂದು ಕಾಮೆಂಟ್