Widgets Magazine

ಟಿವಿ ನಿರೂಪಕ, ಖ್ಯಾತ ಗಾಯಕ ದಿವಾಳಿಯಾದರಾ?

ಮುಂಬೈ| Jagadeesh| Last Modified ಶುಕ್ರವಾರ, 16 ಅಕ್ಟೋಬರ್ 2020 (18:53 IST)
ಖ್ಯಾತ ಗಾಯಕ ಮತ್ತು ರಿಯಾಲಿಟಿ ಶೋ ನಿರೂಪಕರೊಬ್ಬರು ದಿವಾಳಿಯಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಹಿಂದಿ ಸಂಗೀತದ ರಿಯಾಲಿಟಿ ಶೋ ಇಂಡಿಯನ್ ಐಡಲ್ ನ ನಿರೂಪಕ ಆದಿತ್ಯ ನಾರಾಯಣ್  ದಿವಾಳಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

ಎಲ್ಲರಂತೆ ಕೊರೊನಾ ವೈರಸ್ ಲಾಕ್‌ಡೌನ್ ಪರಿಣಾಮ ಆದಿತ್ಯ ಮೇಲೆ ಆಗಿದ್ದರಿಂದ ಆರ್ಥಿಕ ಪರಿಣಾಮ ಬೀರಿದೆ. ಆದಿತ್ಯ ಅವರ ಖಾತೆಯಲ್ಲಿ 18,000 ರೂ. ಮಾತ್ರ ಇದೆ. ಅಕ್ಟೋಬರ್ ವೇಳೆಗೆ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ತನ್ನ ಬೈಕ್‌ನಂತೆ ವೈಯಕ್ತಿಕ ವಸ್ತುಗಳನ್ನು ಮಾರಾಟ ಮಾಡಲು ಪ್ರಾರಂಭಿಸಬೇಕಾಗುತ್ತದೆ ಎಂದು ವದಂತಿ ಹರಡಿತ್ತು.  

ತಮ್ಮ ಬಗ್ಗೆ ಪ್ರಚಾರ ಆಗುತ್ತಿರುವ ವರದಿಗಳು ಉತ್ಪ್ರೇಕ್ಷೆಯಾಗಿವೆ ಆದಿತ್ಯ ಹೇಳಿದ್ದಾರೆ. ನಾನು ಇತರರಂತೆ ಕಠಿಣ ಸಮಯವನ್ನು ಎದುರಿಸಿದ್ದೇನೆ, ಆದರೆ ನಾನು ದಿವಾಳಿಯಾಗಿಲ್ಲ. ಈಗ ಎಲ್ಲವೂ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.





ಇದರಲ್ಲಿ ಇನ್ನಷ್ಟು ಓದಿ :