ರಶ್ಮಿಕಾ ವಿದೇಶ ಭೇಟಿಗೆ ವಿಜಯ್ ದೇವರಕೊಂಡ ಕಾರಣ?

ಹೈದರಾಬಾದ್| Krishnaveni K| Last Modified ಶುಕ್ರವಾರ, 26 ನವೆಂಬರ್ 2021 (10:50 IST)
ಹೈದರಾಬಾದ್: ನಟಿ ಇತ್ತೀಚೆಗೆ ವಿದೇಶ ಪ್ರವಾಸಕ್ಕೆ ತೆರಳಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.

ರಶ್ಮಿಕಾ ಕೆಲವು ದಿನಗಳ ಬ್ರೇಕ್ ಗಾಗಿ ವಿದೇಶ ಪ್ರವಾಸ ಮಾಡುತ್ತಿರುವುದಾಗಿ ಹೇಳಿದ್ದರು. ಆದರೆ ಯಾವ ದೇಶಕ್ಕೆ ತೆರಳುತ್ತಿದ್ದೇನೆ ಎಂದು ಹೇಳಿರಲಿಲ್ಲ. ಆದರೆ ಅವರು ಪ್ರಕಟಿಸಿದ ಫೋಟೋಗಳನ್ನು ನೋಡಿದರೆ ಪ್ಯಾರಿಸ್ ಗೆ ತೆರಳಿರುವುದು ಸ್ಪಷ್ಟವಾಗಿದೆ.


ಇದರ ಜೊತೆಗೆ ರಶ್ಮಿಕಾ ಅಮೆರಿಕಾಗೆ ತೆರಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ರಶ್ಮಿಕಾಗೆ ಆಪ್ತರಾಗಿರುವ ನಟ ಸದ್ಯಕ್ಕೆ ಅಮೆರಿಕಾದಲ್ಲಿ ಲೈಗರ್ ಸಿನಿಮಾ ಶೂಟಿಂಗ್ ನಲ್ಲಿದ್ದಾರೆ. ಹೀಗಾಗಿ ವಿಜಯ್ ಭೇಟಿಯಾಗಲೆಂದೇ ರಶ್ಮಿಕಾ ಅಮೆರಿಕಾಗೆ ತೆರಳುತ್ತಾರೆ ಎಂಬ ಗಾಸಿಪ್ ಹಬ್ಬಿದೆ.


ಇದರಲ್ಲಿ ಇನ್ನಷ್ಟು ಓದಿ :