ಚೆನ್ನೈ : ಸುಚೀಂದ್ರನ್ ನಿರ್ದೇಶನದ ನಟ ಸಿಂಬು ಅಭಿನಯದ ಈಶ್ವರನ್ ಚಿತ್ರ ಜನವರಿ 14ರಂದು ಸಂಕ್ರಾಂತಿ ಹಬ್ಬದ ವಿಶೇಷ ಉಡುಗೊರೆವಾಗಿ ಬಿಡುಗಡೆಯಾಗಲಿದೆ. ಆದರೆ ಈ ಮಧ್ಯೆ ಇದೀಗ ಈ ಚಿತ್ರಕ್ಕೆ ಸಂಕಟವೊಂದು ಎದುರಾಗಿದೆ. ಇತ್ತೀಚೆಗೆ ಈ ಚಿತ್ರ ಪೋಸ್ಟರ್ ನಲ್ಲಿ ಸಿಂಬು ಕಾಣಿಸಿಕೊಂಡಿದ್ದು, ಜನರನ್ನು ಆಕರ್ಷಿಸಿತ್ತು. ಆದರೆ ಆ ವೇಳೆ ಸಿಂಬು ಚಿತ್ರದಲ್ಲಿ ಹಾವು ಹಿಡಿದಿರುವುದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಅದು ಗ್ರಾಫಿಕ್ಸ್ ಎಂದು ದೃಢಿಕರಿಸಿದ ಬಳಿಕ ವಿವಾದ ತಣ್ಣಗಾಯಿತು.