ಹೈದರಾಬಾದ್ : ಬಹು ಬಜೆಟ್ ಚಿತ್ರ ಆದಿಪುರುಷ ಸಿನಿಮಾದಲ್ಲಿ ನಟ ಪ್ರಭಾಸ್ ಅಭಿನಯಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈ ಸಿನಿಮಾದಲ್ಲಿ ನಟ ಪ್ರಭಾಸ್ ಅವರನ್ನು ಆಯ್ಕೆ ಮಾಡಲು ಮುಖ್ಯ ಕಾರಣ ಏನೆಂಬುದನ್ನು ಚಿತ್ರತಂಡ ತಿಳಿಸಿದೆ. ಹೌದು. ಆದಿಪುರುಷ ಸಿನಿಮಾ ಒಂದು ಪೌರಾಣಿಕ ಸಿನಿಮಾವಾಗಿದೆ. ಬಾಹುಬಲಿಯಂತಹ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿ ಜನರ ಮನಗೆದ್ದ ನಟ ಪ್ರಭಾಸ್ ಅವರನ್ನು ಆದಿಪುರುಷ ಸಿನಿಮಾದಲ್ಲಿ ನಾಯಕನಾಗಿ ನಿರ್ದೇಶಕ ಓಂ ರಾವತ್ ಆಯ್ಕೆ ಮಾಡಿದ್ದಾರೆ.