Widgets Magazine

ರಶ್ಮಿಕಾ ಮಂದಣ್ಣಗೆ ಈ ವ್ಯವಹಾರಗಳೇ ಮುಳುವಾಯಿತೇ?!

ಬೆಂಗಳೂರು| Krishnaveni K| Last Modified ಗುರುವಾರ, 16 ಜನವರಿ 2020 (13:22 IST)
ಬೆಂಗಳೂರು: ನಟಿ ಸಿನಿಮಾ ರಂಗಕ್ಕೆ ಕಾಲಿಟ್ಟು ಮೂರು ವರ್ಷ ಕಳೆದಿದೆಯಷ್ಟೇ. ಆಗಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಣ್ಣು ಅವರ ವ್ಯವಹಾರಗಳ ಮೇಲೆ ಬಿದ್ದಿದ್ದು ಹೇಗೆ?

 
ಕನ್ನಡದಲ್ಲಿ ಅಪರೂಪಕ್ಕೊಂದು ಸಿನಿಮಾದಲ್ಲಿ ನಟಿಸಿದ್ದರೂ ಟಾಲಿವುಡ್ ನಲ್ಲಿ ಟಾಪ್ ಹೀರೋಯಿನ್ ಆಗಿದ್ದಾರೆ. ಟಾಪ್ ಹೀರೋಗಳ ಜತೆ ನಟಿಸುತ್ತಿದ್ದಾರೆ. ಇದಕ್ಕೆಲ್ಲಾ ನಗದು ರೂಪದಲ್ಲೇ ರಶ್ಮಿಕಾ ಲಕ್ಷಾಂತರ ಹಣ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
 
ಜತೆಗೆ ತಮ್ಮ ತವರೂರು ವಿರಾಜಪೇಟೆಯಲ್ಲಿ ರೆಸಿಡೆನ್ಷಿಯಲ್ ಶಾಲೆ ತೆರೆಯುವ ಉದ್ದೇಶದಿಂದ ಇತ್ತೀಚೆಗಷ್ಟೇ 5 ಎಕರೆ ಜಮೀನು ಖರೀದಿ ಮಾಡಿದ್ದರು ಎನ್ನಲಾಗಿದೆ. ಈ ವ್ಯವಹಾರಗಳೇ ರಶ್ಮಿಕಾಗೆ ಮುಳುವಾಗಿದೆ ಎನ್ನಲಾಗಿದೆ. ಇದುವರೆಗೆ ರಶ್ಮಿಕಾ ನಟಿಸಿದ್ದು ಕೇವಲ 13 ಸಿನಿಮಾಗಳಲ್ಲಿ. ಆದರೆ ಇಷ್ಟು ಬೇಗ ರಶ್ಮಿಕಾ ಕೋಟ್ಯಾಧಿಪತಿಯಾಗಿರುವುದು ಐಟಿ ಅಧಿಕಾರಿಗಳ ದಾಳಿಗೆ ಕಾರಣ ಎನ್ನಲಾಗಿದೆ. ಇನ್ನು ಕೆಲವು ಮೂಲಗಳ ಪ್ರಕಾರ ಪ್ರಿನ್ಸ್ ಮಹೇಶ್ ಬಾಬು ಸಿನಿಮಾಗೆ ರಶ್ಮಿಕಾ ಸಂಭಾವನೆ ಕೋಟಿ ತಲುಪಿದೆ ಎನ್ನಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ರಶ್ಮಿಕಾರೇ ಟಾಪ್ ಸಂಭಾವನೆ ಪಡೆಯುವ ನಟಿಯಾಗಿದ್ದಾರೆ. ಹೀಗಾಗಿ ರಶ್ಮಿಕಾಗೆ ಐಟಿ ಉರುಳು ಸುತ್ತಿಕೊಂಡಿದೆ.
ಇದರಲ್ಲಿ ಇನ್ನಷ್ಟು ಓದಿ :