ಬೆಂಗಳೂರು: ಬೆಳ್ಳಂ ಬೆಳಿಗ್ಗೆ ಕಿರಿಕ್ ಪಾರ್ಟಿ ಹೀರೋಯಿನ್ ರಶ್ಮಿಕಾ ಮಂದಣ್ಣ ಮನೆಗೆ ದಾಳಿ ಮಾಡಿದ ಐಟಿ ಅಧಿಕಾರಿಗಳು ಆಂಧ್ರ ಮತ್ತು ತೆಲಂಗಾಣ ವಿಭಾಗದವರು ಎನ್ನಲಾಗಿದೆ.ತೆಲುಗಿನಲ್ಲಿ ಟಾಪ್ ಹೀರೋಯಿನ್ ಎನಿಸಿಕೊಂಡಿರುವ ಕೊಡಗಿನ ಬೆಡಗಿ ರಶ್ಮಿಕಾ ಆದಾಯದ ಬಗ್ಗೆ ಐಟಿ ಕಣ್ಣು ಬಿದ್ದಿದ್ದು, ಸತತ ಐದು ಗಂಟೆಯಿಂದ ವಿರಾಜಪೇಟೆಯಲ್ಲಿರುವ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿ ಮಾಡಿದ ಅಧಿಕಾರಿಗಳ ಪೈಕಿ ಕರ್ನಾಟಕ ಮೂಲದವರು ಯಾರೂ ಇಲ್ಲ ಎನ್ನಲಾಗಿದೆ.ಇನ್ನು, ವಿರಾಜಪೇಟೆಯ ನಿವಾಸದಲ್ಲಿರುವ ಐಟಿ ಅಧಿಕಾರಿಗಳಿಗೆ