ಬೆಂಗಳೂರು: ಬೆಳಿಗ್ಗೆಯಿಂದ ತಮ್ಮ ನಿವಾಸಗಳ ಮೇಲೆ ನಡೆಯುತ್ತಿರುವ ಐಟಿ ದಾಳಿ ಬಗ್ಗೆ ನಟರಾದ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.ಮುಂಬೈನಿಂದ ಈಗಷ್ಟೇ ಬೆಂಗಳೂರಿಗೆ ಬಂದಿಳಿದ ಯಶ್ ಐಟಿ ದಾಳಿ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇದರ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ. ಫಸ್ಟ್ ಟೈಮ್ ಇದು ನಂಗೂ. ಏನಾಗಿದೆ ಮನೆಯಲ್ಲಿ ಅಂತ ನನಗೂ ಗೊತ್ತಿಲ್ಲ. ಆದರೆ ಇದೆಲ್ಲಾ ಪ್ರೊಸೀಜರ್ ಅಷ್ಟೇ. ಅದಕ್ಕೆ ತಲೆಕೆಡಿಸಿಕೊಳ್ಳುಂವತದ್ದು ಏನೂ ಇಲ್ಲ.