ಬೆಂಗಳೂರು: ನಿರ್ದೇಶಕ, ನಟ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ನಿನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಪ್ಪನಾದ ಖುಷಿಯಲ್ಲಿರುವ ರಿಷಬ್ ಗೆ ಸ್ಯಾಂಡಲ್ ವುಡ್ ತಾರೆಯರು ಶುಭಾಷಯ ಕೋರಿದ್ದಾರೆ.ಅದರಲ್ಲೂ ಹರಿಪ್ರಿಯಾ ಮಾಡಿರುವ ಟ್ವೀಟ್ ಒಂದು ತುಂಬಾ ಫನ್ನಿಯಾಗಿದೆ. ರಿಷಬ್ ಲಾಲಿ ಪಾಪ್ ಹಿಡಿದಿರುವ ಫೋಟೋವೊಂದನ್ನು ಪ್ರಕಟಿಸಿರುವ ಹರಿಪ್ರಿಯಾ ಇನ್ನಾದರೂ ಕ್ಯಾಂಡೀ ತಿನ್ನುವುದು ನಿಲ್ಲಿಸು. ಇಲ್ಲದಿದ್ದರೆ ಮಗನಿಗೆ ನೀನೇ ವಿಲನ್ ಆಗ್ತೀಯಾ ಎಂದು ಕಾಲೆಳೆದಿದ್ದಾರೆ.ಇನ್ನು, ರಶ್ಮಿಕಾ ಮಂದಣ್ಣ, ಬಿ ಸುರೇಶ,